Aug 7, 2010

ಮುದ್ದು !!!



ಮುದ್ದು ...ಹೆಸರು ತುಂಬಾ ಮುದ್ದಾಗಿದೆ ಅಲ್ವಾ..!!!ಹೆಸರಿನಷ್ಟೇ ಮುದ್ದಾಗಿದೆ ಅವಳು ಬರೆಯುವ ಕವಿತೆಗಳು!!ನಾನು ಹೇಳ್ತಾ ಇರುವುದು ಹನ್ನೆರಡು ವರ್ಷದ ಪುಟಾಣಿ ಕವಯಿತ್ರಿ ಬಗ್ಗೆ..ಊರು ತೀರ್ಥಹಳ್ಳಿ..ಸದ್ಯ ಏಳನೇ ತರಗತಿಯ ವಿದ್ಯಾರ್ಥಿನಿ..ಆದರೆ ಇವಳು ಬರೆಯುವ ಕವನ ಲೇಖನ,ಕವನಗಳನ್ನು ಓದಿದಾಗ ನಿಮಗೆ ಇದು ಪುಟಾಣಿ ಹುಡುಗಿ ಬರೆದದ್ದಾ? ಎಂದು ಅನಿಸುತ್ತದೆ.. ಅವಳ ಕಲ್ಪನೆಗಳು ಅವಳು, ಬಳಸುವ ಶಬ್ದಗಳು ಎಲ್ಲವೂ ವಿಷೇಷ ವಾಗಿವೆ!ಎಲ್ಲಾ ಮಕ್ಕಳೂ ಇಂಗ್ಲೀಷ್ ಮೀಡಿಯಂಗೆ ಹೋಗ್ತೀನಿ ಅಂತಿದ್ರೆ ..ಇವಳು ಇಂಗ್ಲಿಶ್ ಮೀಡಿಯಂ ಶಾಲೆ ಬಿಟ್ಟು ಕನ್ನಡ ಮಾಧ್ಯಮ ಶಾಲೆ ಸೇರಿದ್ದಾಳೆ ಅಂತೆ..ತಾನು ಬರೆದ ಕತೆ,ಕವನ,ಲೇಖನಗಳನ್ನು ಬೇರೆ ಬೇರೆ ಪತ್ರಿಕೆಗಳಿಗೆ ಕಳುಹಿಸುತ್ತಿದ್ದಳು.ಅದು ಪ್ರಕಟಗೊಳ್ಳದೆ ಇದ್ದಾಗ ಬೇಜಾರಾಗಿ;ಅವಳೇ ಸ್ವಂತ ಪತ್ರಿಕೆಯನ್ನು ಪ್ರಾರಂಭಿಸುವ ಯೋಜನೆ ರೂಪಿಸಿದಳು ..ಈಗ ಕೈಬರಹದಲ್ಲಿ ಒಂದು ದ್ವೈಮಾಸಿಕ ಪತ್ರಿಕೆ ಪ್ರಕಟಿಸುತ್ತಿದ್ದಾಳೆ..ಪತ್ರಿಕೆಯ ಹೆಸರು 'ಮಂದಾನಿಲ "...ಎಷ್ಟೊಂದು ಅರ್ಥಪೂರ್ಣವಾಗಿದೆ!
ಇಲ್ಲಿ ನೋಡಿ "ಕೆಂಡಸಂಪಿಗೆ"ಯಲ್ಲಿ ಮುದ್ದು ಬರೆದ "ಮತ್ತೆ ಬಂತಲ್ಲ ಮಳೆ" ಕವಿತೆಯ ಸಾಲುಗಳನ್ನು..
"ಮುಂಗಾರಿನ ಆರಂಭದ ದಿನಗಳಲಿ
ಆರಂಭ ಶೂರನಂತೆ ಅಬ್ಬರಿಸಿ
ಬತ್ತಿ ಬರಡಾದ ಹೊಲ ಬಾವಿ
ನದಿ ಝರಿ ಕೆರೆಗಳ ಹಲ್ಕಿರಿದು ಅಣಕಿಸಿ
ಬರುವುದೇ ಇಲ್ಲವೆಂಬಂತೆ ಹೋದದ್ದು
ಮತ್ತೆ ಬಂತಲ್ಲ ಮಳೆ!
...
...ಮಕ್ಕಳು ಶಾಲೆಗೆ ಹೊರಟಾಗಲೇ
ಬಾಣಂತಿ ಕೂಸಿನ ಬಟ್ಟೆ
ಒಣಗಿಸುವಾಗಲೇ
ಮತ್ತೆ ಬಂತಲ್ಲ ಮಳೆ!
....
......ರೈತ ನಾಟಿಗೆ ಗದ್ದೆಗಳಲಿ ನೀರಿಗಿಳಿಯುವುದ
ಕಾಯುವ ಹೊತ್ತು
ಬಾಲಕನ ಶವವ ನೀರಿಂದ
ಮೇಲೆಳೆಯುವ ಹೊತ್ತು
ನೀರು ತುಂಬಿದ ಮನೆಗಳಲಿ
ಬಟ್ಟೆ ಪಾತ್ರೆ ತಡಕಾಡುವ ಹೊತ್ತು
ಸೊಂಟಮಟ್ಟ ನೀರಿನಲ್ಲಿ ನಿಂತು
ಬೀಳುವ ಮಾಡಿಗೆ
ಊರುಗೋಲು ನೆಡುವ ಹೊತ್ತು
ಹೊತ್ತು ನೋಡಿಯೇ
ಮತ್ತೆ ಬಂತಲ್ಲ ಮಳೆ!
"
///
"ಬಾಣಂತಿ ಕೂಸಿನ ಬಟ್ಟೆ ಒಣಗಿಸುತ್ತಿರುವ" ..."ನೀರು ತುಂಬಿದ ಮನೆಗಳಲಿ..." ...."ಹೊತ್ತು ನೋಡಿಯೇ ಮತ್ತೆ ಬಂತಲ್ಲ ಮಳೆ" ಸಾಲುಗಳಲ್ಲಿನ ಕಲ್ಪನೆ ಅದ್ಭುತ ವಾಗಿದೆ ಅಲ್ವಾ!!
ಮಲೆನಾಡಿನಲ್ಲಿ ಸುಂದರ ಪ್ರಕೃತಿ ಮಡಿಲಿನಲ್ಲಿ ಇದ್ದು ತನ್ನ ವಯಸ್ಸಿನ ಬೇರೆ ಮಕ್ಕಳಂತೆ ಅಲ್ಲದೆ ಪ್ರಪಂಚದ ಆಗುಹೋಗುಗಳನ್ನು, ಸುತ್ತಲಿನ ಪರಿಸರವನ್ನು ಕಾವ್ಯಾತ್ಮಕವಾಗಿ ಪ್ರಬುದ್ಧವಾಗಿ ವರ್ಣಿಸುವ ಕಲೆಯ ಬುದ್ಧಿ ಮುದ್ದುವಿಗೆ ಸಿದ್ಧಿಸಿದೆಯೇನೋ!!
ಉಜ್ವಲ ಭವಿಷ್ಯವನ್ನು ಹಾರೈಸೋಣ!!


------------------------------------------------------------------------------------------

3 comments:

prajwal said...

wow..nice info..

Sudheer Prabhu said...

hey nice man. thanks for the information.

Unknown said...

ya....she's really great...