Dec 15, 2010

ಮಮತಾಮಯಿ

ಮತ್ತೆ ಮಮತಾಮಯಿ ಅಮ್ಮನ
ಸತ್ಯದರ್ಶನ;
ಕೊಟ್ಟಷ್ಟೂ ಕಿತ್ತುಕೊಳ್ಳುವ ಕೋತಿಗಳಿಗೆ,
ತುತ್ತು ಹಂಚುವ ಕೆಲಸ!!
ವಾನರನಿಂದ ನರ ಎಂಬುದು,
ನಮಗೆ ತಿಳಿದಿದೆಯಷ್ಟೇ;
ಆದರೆ,
ವಾನರರಲ್ಲೂ ನರನನ್ನು
ಕಾಣುತ್ತಿದ್ದಾಳೆ ತನ್ನ ವಿಶಾಲ ದೃಷ್ಟಿಯಿಂದ!

ಹೆತ್ತು ಸಾಕಿದ ಮಕ್ಕಳೆಲ್ಲ ದೂರ ದೂರ,
ಹೃದಯವಂತೂ ಭಾರ..
ನನಗೆ ಕಪಿಗಳದ್ದು  ಕೇವಲ ಕುಚೇಷ್ಟೆಯಲ್ಲ;
ಹರಸಾಹಸ ಮಾಡುತಿವೆ ಅವು,
ನನ್ನ ಮನಸನ್ನು ಹಗುರ ಮಾಡಲು.
ಇದು ತಾಯಿಯ ಒಡಲಾಳದ ನುಡಿ!!

ಮರದಿಂದಿಳಿದ ಮರ್ಕಟಗಳಿಗೆಲ್ಲಾ,
ಅವ್ವ  ನೀಡುವ ತುತ್ತು ಮೃಷ್ಟಾನ್ನ ;
ಅವಳ ಮನಸ್ಸೂ ಪ್ರಸನ್ನ !!
ಜೀವನ ಯಾನದಲ್ಲಿ,
ಬಹುಪಾಲು ಕ್ರಮಿಸಿದ ಮೇಲೂ
ಬತ್ತದ ಪ್ರೀತಿಯ ಚಿಲುಮೆ ಇವಳು.
ಮಾತೃ ಪಾದಕ್ಕಿದೋ ನಮನ!! 











(ಚಿತ್ರ ಕೃಪೆ:ಮಯೂರ )
-----------------------------------------------------------------------------------------

4 comments:

Vrushank Bhat said...

chennagide

ಮೌನರಾಗ said...

tumbaa chennagi barediddira sir...masth ishta andu...

Sudheer Prabhu said...

hey this is superb

Vinod Rai Karmai said...

@vrushank bhat,ಮೌನರಾಗ, Sudheer : ಧನ್ಯವಾದಗಳು :-)