May 13, 2012

ಅಮ್ಮ ಬೇಕಾಗಿದ್ದಾರೆ(ಳೆ)!!


ಅಳುತ್ತಾ ಜಳಕ ಮಾಡುವಾಗ,
ಜಿಗಿದು  ಬೆತ್ತಲೆ ಓಡುವಾಗ,
ಪ್ರೀತಿಯೇಟು ಕೊಟ್ಟಿದ್ದೆ ;
ಬಿದ್ದಷ್ಟೂ ಬಾರಿ,
ನನ್ನೆಬ್ಬಿಸುತ್ತಿದ್ದೆ.
ಈಗ ಮಾತ್ರ ಸುಮ್ಮನಿದ್ದೀಯ!
ನಾನು ದೊಡ್ದವನಾಗಬಯಸಿದ್ದು ನಿಜ;
ಆದರೆ ಈಗ ಮಗುವಾಗುವಾಸೆ ..
ಎಂಥ ವಿಪರ್ಯಾಸ!!

ಹಸಿವಿದ್ದರೂ..ಇರದಿದ್ದರೂ,
ಉಣಿಸುತ್ತಿದ್ದೆ ನನಗೆ,
ತೋರಿಸಿ ಗುಬ್ಬಿ ,ಗಿಣಿ,ಚಂದಮಾಮನನ್ನು!!
ಓದಿ ಸುಸ್ತಾಗಿ ಈಗ...
ದೊಡ್ಡ ಪುಸ್ತಕವೇ ತಲೆದಿಂಬು!!
ಭಾಸವಾಗುತಿದೆ ನಿದ್ದೆಯಿಂದೆಬ್ಬಿಸಿ ನೀನು..
ಊಟಕೆ ಬಾ ಎಂದು ಕರೆದಂತೆ!!

ಬೇಡವೆಂದರೂ ಮಳೆಯಲ್ಲಿ ನೆಂದು.
ಮರುದಿನ ಜ್ವರ,ನೆಗಡಿ..
ಬಯ್ಯುತ್ತಾ ನೀನು,
ಸಿಂಬಳ ಸುರಿವ ಮೂಗನೊರೆಸಿದ್ದು;
ನಾ ನಿನ್ನ ನಿದ್ದೆಗೆಡಿಸಿದ್ದು!!
ಎಲ್ಲಾ  ನೆನಪಾಗುತಿದೆ.
ಆಗ ಎಲ್ಲವನ್ನೂ ನೋಡುತ್ತಿದ್ದೆ,
ಬೆರಗುಗಣ್ಣಿನಿಂದ..
ಈಗ ನೀನೇ ವಿಸ್ಮಯ!!

ಮನೆ ಬಿಟ್ಟು ಹೊರಟಾಗ,
"ಜೋಪಾನ ಕಂದಾ..."ಎಂದು ನೀನಂದಿದ್ದು;
ನಂಗೆ ಅಷ್ಟೇನೂ ಗಂಭೀರವಾಣಿಯಾಗಿರಲಿಲ್ಲ.
ಆಚೆ ಬರುವ ಖುಷಿಯಲ್ಲಿ,
ಬೇರೆಲ್ಲಾ ಗೌಣವಾಗಿತ್ತು !!
ಗುರುತಿಸದೇ ಹೋದೆನಾನು;
ನಿನ್ನ ಕಣ್ಣ ಬಿಂದುವನ್ನು..!

ಪ್ರೀತಿಗೆ ಬರಬಂದಿದೆ,
ನಿನ್ನ ನೆನಪಾಗುತಿದೆ.
ರಚ್ಚೆ  ಹಿಡಿದು,
ರಪರಪನೆ ನಿನ್ನೆದೆಗೆ ಬಡಿದು;
ರಂಪ ಮಾಡಲಾರೆ ಅಂದಿನಂತೆ!
ನಿನ್ನ ಮಡಿಲಲ್ಲಿ ಒರಗಬೇಕೆನಿಸುತಿದೆ...
ಕೋಪ ಇಲ್ಲ ತಾನೇ!?
-------------------------------------------------------------------------------------------------------------------

ಕನ್ನಡ ಬ್ಲಾಗ್ ಪುಟದಲ್ಲಿ..(comments @KANNADA BLOG- facebook page)... 

8 comments:

prashasti said...

ಚೆನ್ನಾಗಿದೆ ಸರ್ :-)

ಪುಷ್ಪರಾಜ್ ಚೌಟ said...

ನಿನ್ನ ಮಡಿಲಲ್ಲಿ ಒರಗಬೇಕೆನಿಸುತಿದೆ... ಮತ್ತೆ ಮಗುವಾಗುವಾಸೆ. ಚೆನ್ನಾಗಿದೆ ಕವನದೊಳಗಿನ ಭಾವ, ಕಾಳಜಿ.

Vinod Rai Karmai said...

@prashasti:ಧನ್ಯವಾದಗಳು :-)

Vinod Rai Karmai said...

@ಪುಷ್ಪರಾಜ್ ಚೌಟ:ಓದಿ ನಿಮ್ಮ ಅಭಿಪ್ರಾಯ ತಿಳಿಸಿದಕ್ಕೆ ಧನ್ಯವಾದಗಳು :-)

Anonymous said...

ಜೀವಂತ ಕವಿತೆ ಗೆಳೆಯಾ ... ಓದಿ ಎಲ್ಲೋ ಕಳೆದು ಹೋದಂತೆ..

www.nenapinasanchi.wordpress.com

Vinod Rai Karmai said...

@nenapinasanchi:ಧನ್ಯವಾದಗಳು :-)

Sudheer Prabhu said...

prathiyobbara manasina bhavanegalu..adre namma kaiyalli padagannagi parivarthislikke sadhya illa..but u did it

Vinod Rai Karmai said...

@Sudheer Prabhu :ಧನ್ಯವಾದಗಳು :-)