Jun 16, 2012

ವಿಪರ್ಯಾಸ

         1
ಎದ್ದು ಕುಳಿತೆ ಹರುಷದಲ್ಲಿ,
ಚಂದದೊಂದು ಕನಸ ಕಂಡು;
ಅಂದುಕೊಂಡೆ ಬದುಕಿನಲ್ಲಿ,
ಇಂಥದೊಂದು ಘಟಿಸಲೆಂದು!
           2
ಬಾನಾಡಿಯಾಗಿ ಖುಷಿಯಲ್ಲಿ,
ಹಾರುತ್ತಿರಲು ಅತಿ ಹಿತವಾಯಿತು;
ಕಾರಣ ಹುಡುಕುವುದು ಎಲ್ಲಿ,
ಹೇಗೋ ಕನಸು ಕವಲೊಡೆಯಿತು!
            3
ಮೋಡದ ಮರೆಯಲ್ಲೊಂದು,
ಮರೆಯಾಗಿ ಹೋಯಿತು;
ಬಿಸಿಲಿನತ್ತ ಬಾಗಿ ಇನ್ನೊಂದು,
ಬಸವಳಿದು ಬಾಡಿ ಹೋಯಿತು!
----------------------------------------------------------------

1 comment:

ಪುಷ್ಪರಾಜ್ ಚೌಟ said...

ವಿಪರ್ಯಾಸದೊಳಗೊಂದಷ್ಟು ವಿಷಾದ. ಅಭಿವ್ಯಕ್ತಿಗಳು ಸುಂದರವಾದ ರಚನೆಯಲ್ಲಿ ಹೊರಹೊಮ್ಮಿವೆ