May 26, 2012

ವಿರಹ...ಹೃದಯದ ಹೊರಳಾಟ!

ಪ್ರೇಮವಂಚಿತ ಹುಡುಗಿ ,ವಿಧಿಯನ್ನು ಶಪಿಸುತ್ತಾ ಹೇಳಿದ ಅವಳ ಜೀವನದ ಕಥೆಯ ಕವನವಿದು!
--------------------------------------------------------------------------------------------


ಮೃದುಲ ಹೃದಯದ ಮೇಲೆ,ಚೂಪಾದ ಉಗುರಿನ ಗೀರು,
ಹುಚ್ಚು ಪ್ರೀತಿಯಿಂದ;
ಮಾಸದ ಗಾಯದ ಮೇಲೆ, ಸುರಿದಂತೆ ಉಪ್ಪಿನ ನೀರು..
ನೆನಪ ನೋವಿನಿಂದ!     ||ಪ||

ವಿಷಗಾಳಿಯ ಉಸಿರಾಟ,
ಧರೆಗುರುಳಿ ಧಗಧಗನೆ,
ಹೊತ್ತಿ ಉರಿಯುತಿದೆ ಕನಸ ಗೋಪುರ.
ಒಂದೆಂಬ ಬಂಧವನು ವಿಧಿ ಹಾಳುಮಾಡಿ,
ರಮಿಸುತಿದೆ ಕಣ್ಣೀರಿನಲ್ಲೇ ಸ್ನಾನ ಮಾಡಿ!  || ೧||

ವಿಷಮ ಪ್ರೀತಿಯಾಟ,
ಮರುಕದಲಿ ಮನಸಿನಲಿ,
ತುಂಬಿ ಹರಿಯುತಿದೆ ದುಃಖದ ಸಾಗರ.
ಶೋಕಲೋಕದಲ್ಲಿ ಏಕಾಂಗಿ ಪಯಣ,
ದಾರುಣ ಕೊನೆಯ ಕಥೆಯಿದು ಜೀವನ!   ||೨||












  ಚಿತ್ರ ಕೃಪೆ :www.wallpaperhere.com

 -------------------------------------------------------------------------------------------------------

2 comments:

ಪುಷ್ಪರಾಜ್ ಚೌಟ said...

ವಿಷಾದ ಭಾವ! ಒಲವ ತುಡಿತಗಳು ಕೆಲವೊಮ್ಮೆ ಯಾವುದೋ ಕಟ್ಟುಪಾಡಿನ ಹಿಡಿತಕ್ಕೆ ಸಿಕ್ಕಿ ದಾರುಣ ಅಂತ್ಯ ಕಂಡಿದ್ದನ್ನು ಕೇಳಿದ್ದೇನೆ. ನೋಡಿದ್ದೇನೆ. ನಿಜವಾಗಿಯೂ ಅದು ದಾರುಣವೇ.

ಆ ದಾರುಣಕೆ ಸನ್ನಿವೇಶಕ್ಕೆ ಪದ ಕಟ್ಟುವಲ್ಲಿ ನೀವು ಸಫಲ. ಒಳ್ಳೆ ಪ್ರಯತ್ನ.

Vinod Rai Karmai said...

ಧನ್ಯವಾದಗಳು....ಕೆಲವು ಕಟ್ಟುಪಾಡು,ಧೋರಣೆಗಳು ಬದಲಾದರೆ ಇಂತಹ ದಾರುಣ ಕಥೆಗಳೂ ಕಡಿಮೆಯಾಗಬಹುದು ಅಲ್ವಾ ಸರ್ ?